ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಎನ್‌ ಟಿ ಎಸ್‌ ಇ

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ

National Talent Search Examination (NTSE)

 

ಪರೀಕ್ಷೆಯ ಅರ್ಹತೆ:

                        ಪರೀಕ್ಷೆಗೆ ಅರ್ಜಿ ಹಾಕುವ ವóರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

 

ಈ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತದೆ.

 

ಪ್ರಥಮ ಹಂತ

    ಡಿ.ಎಸ್.ಇ.ಆರ್.ಟಿ ಪ್ರಥಮ ಹಂತದ ಪರೀಕ್ಷೆಯನ್ನು ನಡೆಸುತ್ತದೆ. ಮೊದಲನೇ ಹಂತದ ಪರೀಕ್ಷೆಯು 02 ವಿಷಯಗಳನ್ನು ಒಳಗೊಂಡಿರುತ್ತದೆ.

 

ದ್ವಿತೀಯ ಹಂತ

     ಪ್ರಥಮ ಹಂತದ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳಿಗೆ National Council of Educational Research and Training (NCERT) New Delhi ರವರು ದ್ವಿತೀಯ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ.

 

ವಿದ್ಯಾರ್ಥಿವೇತನ

     ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿ ಯು ಸಿ ಯಲ್ಲಿ ತಿಂಗಳಿಗೆ ರೂ. 1250/- ಮತ್ತು ಪದವಿಯಲ್ಲಿ ರೂ. 2000/- ಮತ್ತು ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿ ವೇತನ ಯು.ಜಿ.ಸಿ ನಿಯಮಾನುಸಾರ ನೀಡಲಾಗುತ್ತದೆ.

ಕರ್ನಾಟಕ ರಾಜ್ಯದ ವಿಶೇಷ ಪ್ರೋತ್ಸಾಹ

     ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಕಛೇರಿಯಿಂದ ಪ್ರತಿ ವರ್ಷ ರೂ. 2000/-  ಗಳಂತೆ ಎರಡು ವರ್ಷಗಳ ಕಾಲ (ಪ್ರಥಮ ಮತ್ತು ದ್ವಿತೀಯ ಪಿಯುಸಿ) ವಿದ್ಯಾರ್ಥಿವೇತನ ಅನುದಾನ ಲಭ್ಯವಿದ್ದರೆ ನೀಡುತ್ತದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಚಿಕ್ಕಮಗಳೂರು
ಎನ್‌ ಟಿ ಎಸ್‌ ಇ ಪರೀಕ್ಷಾ ಅರ್ಜಿಗಳ ನೋಂದಣಿ ಅಂಕಿ ಅಂಶ
ಕ್ರ ಸಂ ಬ್ಲಾಕಿನ ಹೆಸರು 2020-21 2021-22 ಸದರಿ ವರ್ಷದ ಸಾಧನೆ
1 ಬೀರೂರು 468 784 316
2 ಚಿಕ್ಕಮಗಳೂರು 1090 1640 550
3 ಕಡೂರು 562 940 378
4 ಕೊಪ್ಪ 306 485 179
5 ಮೂಡಿಗೆರೆ 627 842 215
6 ನ ರಾ ಪುರ 284 378 94
7 ಶೃಂಗೇರಿ 160 247 87
8 ತರೀಕೆರೆ 482 827 345
ಒಟ್ಟು 3979 6143 2164

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

https://dsert.kar.nic.in/kasp/ntsenmms.asp

×
ABOUT DULT ORGANISATIONAL STRUCTURE PROJECTS