ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಜಿಲ್ಲಾ ಸಂಪನ್ಮೂಲ ಘಟಕ ವಿಭಾಗ (DRU) (ಅನೌಪಚಾರಿಕ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ)

ಜಿಲ್ಲಾ ಸಂಪನ್ಮೂಲ ವಿಭಾಗ (DRU) (ಅನೌಪಚಾರಿಕ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ)

  1. ವಯಸ್ಕರ ಶಿಕ್ಷಣ ಹಾಗೂ ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು.
  2. ಮುಂದುವರಿಕೆ ಶಿಕ್ಷಣದ ಬೋಧಕರಿಗೆ ಹಾಗೂ ಮೇಲ್ವಿಚಾರಕರಿಗೆ ಕಾರ್ಯಕ್ರಮಗಳನ್ನು ರೂಪಿಸುವುದು. ಹಾಗೂ ಈ ಬಗೆಯ ಕಾರ್ಯಕ್ರಮಗಳು ಡಯಟ್ ನ ಹೊರಗಡೆ ನಡೆದಾಗಲೂ ಮಾರ್ಗದರ್ಶನ ನೀಡುವುದು ಹಾಗೂ ಇತರೆ ಸಂಸ್ಥೆಗಳೊಂದಿಗೆ ಸಹಕರಿಸುವುದು.
  3. ಅನೌಪಚಾರಿಕ ಶಿಕ್ಷಣ ವಯಸ್ಕರ ಶಿಕ್ಷಣದ ಯೋಜನೆಗಳಲ್ಲಿ ಕೆಲಸ ನಿರ್ವಹಿಸುವುದು. ವಿಷಯ ತಜ್ಞರಿಗೆ ಹಾಗೂ ಕಾರ್ಯಕರ್ತರಿಗೆ ಪುನಶ್ಚೇತನ ತರಬೇತಿಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  4. ಅನೌಪಚಾರಿಕ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣದ ಮೌಲ್ಯಮಾಪನ ಮಾಡುವುದು ಈ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಯೋಜನೆಗಳನ್ನು ಹಾಕಿಕೊಳ್ಳುವುದು.
  5. ವಯಸ್ಕರ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಡಿಮೆ ವೆಚ್ಚದ ಬೋಧನಾ ಉಪಕರಣಗಳ ತಯಾರಿಕೆ ಹಾಗೂ ಇತರೆ ವಿಭಾಗಗಳೊಂದಿಗೆ ನವ ಸಾಕ್ಷರಸ್ಥರಿಗೆ ಪಠ್ಯ ಪುಸ್ತಕಗಳ ತಯಾರಿಕೆ.
  6. ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದರ್ಶನ, ಕ್ಷೇತ್ರ ಪ್ರಕ್ರಿಯೆ ವಿಸ್ತರಣಾ ವಿಭಾಗ ಈ ಯೋಜನೆಗಳನ್ನು ಹಮ್ಮಿಕೊಂಡು ಸಮಸ್ಯೆಗಳನ್ನು ನಿವಾರಿಸುವುದು.
  7. ಕ್ಷೇತ್ರ ತರಬೇತಿ ಮತ್ತು ಕ್ಷೇತ್ರ ಅಧ್ಯಯನ ಹಾಗೂ ಮಾಧ್ಯಮಗಳ ಬಳಕೆ.
  8. ಜನಸಂಖ್ಯಾ ಶಿಕ್ಷಣ ಅಂಗವಾಗಿ ಶಿಶುವಿಹಾರ, ರಾಷ್ರೀಯ ಸೇವಾ ಯೋಜನಾ ಕ್ರಿಯಾಯೋಜನೆ ತಯಾರಿಸುವುದು (ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಹಾಗೂ ಮಾಸಿಕ)
  9. ಪ್ರಮುಖವಾಗಿ ಈ ವಿಭಾಗವು ಇಡೀ ಜಿಲ್ಲೆಗೆ ಸಂಬಂಧಿಸಿದಂತೆ ಶೈಕ್ಷಣಿಕ ಆಭಿವೃದ್ಧಿಗೆ ಸಂಪನ್ಮೂಲ ಕ್ರೂಢೀಕರಿಸುವುದು.
  10. ಕ್ರಿಯಾ ಯೋಜನೆ ತರಬೇತಿ.
  11. ಅನೌಪಚಾರಿಕ ಹಾಗೂ ಔಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಸಂಶೋಧನೆಗಳನ್ನು ಹಮ್ಮಿಕೊಳ್ಳುವುದು.
  12. ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯ ಅನುಷ್ಠಾನ ಹಾಗೂ ಶಿಕ್ಷಕರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದು.
  13. ಸಾಕ್ಷರತಾ ಆಂದೋಲನ ಕಾರ್ಯಕ್ರಮಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.
  14. ಲ್ಯಾಬ್ ಏರಿಯಾ ಕಾರ್ಯಕ್ರಮ ನಿರೂಪಿಸುವುದು, ಅನುಷ್ಠಾನ ಮಾಡುವುದು, ಮೇಲ್ವಿಚಾರಣೆ ಮಾಡುವುದು ಹಾಗೂ ಮಾರ್ಗದರ್ಶನ ನೀಡುವುದು. 
×
ABOUT DULT ORGANISATIONAL STRUCTURE PROJECTS