ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಒಂದು ದಿನದ ಕಾರ್ಯಾಗಾರ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಎಂ.ಇ.ಎಸ್ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಜಿ.ಪ್ರಭು ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಹಂತದ ಅನುಷ್ಠಾನಾಧಿಕಾರಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ರವರು ಕಲಿಕೆಯ ಪ್ರತಿಯೊಂದು ಅಂಶಗಳು ಮಗುವಿನ ಅನುಭವಕ್ಕೆ ಬಂದಾಗ ಕಲಿಕೆ ದೀರ್ಘಕಾಲ ಉಳಿಯುತ್ತದೆ. ಮಕ್ಕಳಿಗೆ ಸರಳವಾಗಿ ಕಲಿಕೆ ದೃಢಗೊಳ್ಳುವ ವಿಧಾನಗಳ ಮೂಲಕ ಶಿಕ್ಷಕರು ಕಲಿಕೆಯಲ್ಲಿ ತೊಡಗಿಸಬೇಕು. ಹೊಸ ಹೊಸ ವಿಧಾನಗಳನ್ನು ಶಿಕ್ಷಕರು ತಾವೇ ಕಂಡುಕೊಳ್ಳಬೇಕೆಂದು ಹಲವು ಉದಾಹರಣೆಗಳ ಮೂಲಕ ತಿಳಿಸಿದರು.  
 
ಡಯಟ್ ಪ್ರಾಂಶುಪಾಲರಾದ ದಯಾವತಿ ರವರು ಮಾತನಾಡಿ ಮಾನ್ಯ ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳಾಗಿರುವ ಜಿ.ಪ್ರಭು ರವರ ಕನಸಿನ ಕೂಸಾಗಿರುವ ಅನುಭವಾತ್ಮಕ ಕಲಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸುವತ್ತ ಎಲ್ಲರೂ ಮುನ್ನಡೆಯಬೇಕು ಎಂದರು. 
 
         ಈ ಕಾರ್ಯಾಗಾರದಲ್ಲಿ ಅನುಭವಾತ್ಮಕ ಕಲಿಕೆ,  ಕಲಿಕಾ ಚೇತರಿಕೆ ಉಪಕ್ರಮ,ವಿದ್ಯಾಪ್ರವೇಶ,ಗಣಿತ ಕಲಿಕಾ ಆಂದೋಲನ,ಪ್ರೇರಣಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು.NAS ಕಾರ್ಯಕ್ರಮದ ವಿಶ್ಲೇಷಣೆಯ ಮಂಡನೆ ಮಾಡಲಾಯಿತು.
 
ಉಪನಿರ್ದೇಶಕರಾದ (ಆಡಳಿತ)  ರಂಗನಾಥಸ್ವಾಮಿ, ಡಯಟ್ ನ ಹಿರಿಯ ಉಪನ್ಯಾಸರು, ಡಿ.ವೈ.ಪಿ.ಸಿ., ಎಲ್ಲಾ ತಾಲ್ಲೂಕಿನ ಬಿ.ಇ.ಒ.ಗಳು, ಅಕ್ಷರದಾಸೋಹ ನಿರ್ದೇಶಕರು, ಇ.ಸಿ.ಒ, ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. 
 
ಡಯಟ್ ನ ಸಂಗೀತ ಶಿಕ್ಷಕರಾದ ಹನುಮಂತರವರು ಪ್ರಾರ್ಥಿಸಿ, ಉಪನ್ಯಾಸಕರಾದ ಮಮತ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
×
ABOUT DULT ORGANISATIONAL STRUCTURE PROJECTS