ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಡಯಟ್‌ನ ಪರಿಚಯ

ಡಯಟ್‌ನ ಪರಿಚಯ

ಡಯಟ್‌ಗಳ ಸ್ಥಾಪನೆ:   ಪ್ರಾಥಮಿಕ ಶಿಕ್ಷಕರ ತರಬೇತಿ ಕೇಂದ್ರಗಳಿದ್ದ ಧಾರವಾಡ ಮತ್ತು ಮೈಸೂರುಗಳಲ್ಲಿ ಡಯಟ್ ಪ್ರಾರಂಭವಾದವು. 1994ರ ವೇಳೆಗೆ ರಾಜ್ಯದಲ್ಲಿ 20 ಡಯಟ್ ಗಳು ಪ್ರಾರಂಭವಾಗುವುದರೊಂದಿಗೆ ಜಿಲ್ಲಾ ಹಂತದಲ್ಲಿ ಸೇವಾ ಪೂರ್ವ ಹಾಗೂ ಸೇವಾನಿರತ ಶಿಕ್ಷಕರ ತರಬೇತಿಗಾಗಿ ಸಂಪನ್ಮೂಲ ಕೇಂದ್ರಗಳ ಚಾಲನೆಯಾಯಿತು. ಇತ್ತೀಚೆಗೆ ಹೊಸದಾಗಿ ರಚನೆಯಾದ ಎಲ್ಲಾ ಜಿಲ್ಲೆಗಳಲ್ಲೂ ಡಯಟ್‌ಗಳು ಪ್ರಾರಂಭವಾಗಿವೆ.

ಡಯಟ್‌ನ ಉದ್ದೇಶಗಳು:

ಪ್ರಾಥಮಿಕ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವುದು.

- ಸೇವಾಪೂರ್ವ ಹಾಗೂ ಸೇವಾನಿರತ ಶಿಕ್ಷಕ ತರಬೇತಿಯನ್ನು ನೀಡುವುದು.

- ಕ್ರಿಯಾ ಸಂಶೋಧನೆಯಲ್ಲಿ ಶಿಕ್ಷಕರನ್ನು ತೊಡಗಿಸುವುದು ಮತ್ತು ತೊಡಗುವುದು.

- ಸಮೀಕ್ಷೆ/ಅಧ್ಯಯನದಲ್ಲಿ ಶಿಕ್ಷಕರನ್ನು ತೊಡಗಿಸುವುದು ಮತ್ತು ತೊಡಗುವುದು.

- ಸಮುದಾಯದೊಡನೆ ಕಾರ್ಯನಿರ್ವಹಣೆ.

- ಶಾಲೆಗಳಿಗೆ ಭೇಟಿ ಮತ್ತು ಮೌಲ್ಯಮಾಪನ.

- ಶಾಲೆಗಳ ಬಲವರ್ಧನೆ ಮಾಡುವುದು.

- ICT ಶಾಲೆಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ.

- ಇಲಾಖೇತರ ಕಾರ್ಯಗಳ ನಿರ್ವಹಣೆ.

- ಸಂಬಂಧಿಸಿದ ಇತರೆ ಕಾರ್ಯಚಟುವಟಿಕೆಗಳು.

ಡಯಟ್ ಮಾರ್ಗದರ್ಶಿ ಸೂತ್ರಗಳ ದಾಖಲೆಯಲ್ಲಿರುವ ಅಂಶಗಳು-ವಿಶಾಲ ಸೂಚಕಗಳು

ಡಯಟ್ ಸಂಸ್ಥೆಗಳು ಕಾರ್ಯಾರಂಭ ಮಾಡುವುದಕ್ಕೂ ಮುನ್ನ ಡಯಟ್‌ಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸುವ ಡಯಟ್ ಮಾರ್ಗದರ್ಶಿ ಸೂತ್ರಗಳು [DIET Guidelines] ಎಂಬ ದಾಖಲೆಯನ್ನು MHRDಯು 1989ರಲ್ಲಿ ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಗಳು ರಾಷ್ರೀಯ ದೃಷ್ಟಿಕೋನವನ್ನು ಆದಾರಿತವಾಗಿ ರಚನೆಯಾಗಿದೆ. ಈ ಮಾರ್ಗದರ್ಶಿಸೂತ್ರಗಳನ್ನು ಬಿಗಿಯಾದ ಕಾನೂನುಗಳು ಎಂದು ಭಾವಿಸದೇ, ವಿಶಾಲ ತಳಹದಿಯಲ್ಲಿ ರಚಿತವಾದ ಸೂಚಕಗಳು ಎಂದು ಭಾವಿಸಬೇಕೆಂದು ಕೋರಲಾಗಿದೆ. ಹಾಗೂ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿರುವ ಪರಿಸ್ಥಿತಿ ಹಾಗೂ ಸ್ಥಳೀಯ ಸಂದರ್ಭಗಳಿಗನುಗುಣವಾಗಿ ಮಾರ್ಪಾಡು ಮಾಡಿಕೊಳ್ಳುವ ಸ್ವಾತಂತ್ರ ಮತ್ತು ಅನುಕೂಲವನ್ನು ಕಲ್ಪಿಸಲಾಗಿದೆ. ಆದರೆ ಈ ನಿಯಮವು ಹುದ್ದೆಗಳು ಹಾಗೂ ಆರ್ಥಿಕ ಅನುದಾನದ ವಿಷಯಗಳಿಗೆ ಅನ್ವಯಿಸುವುದಿಲ್ಲ.

ಡಯಟ್‌ನ ಕಾರ್ಯಗಳು

×
ABOUT DULT ORGANISATIONAL STRUCTURE PROJECTS