ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ [DIET] ಚಿಕ್ಕಮಗಳೂರು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ [DSERT]

Back
ಸೇವಾ ಪೂರ್ವ ಶಿಕ್ಷಕರ ತರಬೇತಿ ವಿಭಾಗ

ಸೇವಾ ಪೂರ್ವ ಶಿಕ್ಷಕರ ತರಬೇತಿ ವಿಭಾಗ (PSTE)

 1. ಪ್ರಾಥಮಿಕ ಶಿಕ್ಷಣ ಶಿಕ್ಷಕರ ತರಬೇತಿಗೆ ಸೇರಬಯಸುವ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡುವದು.
 2. ಶಿಶು ಕೇಂದ್ರೀಕೃತ ಶಿಕ್ಷಣಕ್ಕೆ ಒತ್ತು ನೀಡಿ ಅನುಷ್ಠಾನಗೊಳಿಸಲು ನೆರವಾಗುವುದು.
 3. ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ ಹೊಸ ಬೋಧನಾ ವಿಧಾನಗಳನ್ನು ಹಾಗೂ ವಿನ್ಯಾಸಗಳನ್ನು ನಿರೂಪಿಸುವುದು (ಬಹುತರಗತಿಗಳ ಬೋಧನೆ, ಚಿಕ್ಕ ಗುಂಪುಗಳ ಬೋಧನೆ ಹಾಗೂ ಅನೌಪಚಾರಿಕ ಶಿಕ್ಷಣಕ್ಕೆ ಸಂಬಂಧಿಸಿದ ಬೋಧನೆ ವಿಧಾನಗಳು)
 4. ವ್ಯಕ್ತಿಯ ವಿಕಾಸಕ್ಕೆ ಅನುಗುಣವಾಗುವ ಮೌಲ್ಯ ಶಿಕ್ಷಣ, ಸಾಂಸ್ಕೃತಿಕ ಶಿಕ್ಷಣ ಇವುಗಳನ್ನು ಉತ್ತೇಜನಗೊಳಿಸುವ ಬಗ್ಗೆ ತರಬೇತಿ ನೀಡುವುದು.
 5. ಅನೌಪಚಾರಿಕ ಶಿಕ್ಷಣ ವಯಸ್ಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರಿಯಾದ ಮನೋವೈಜ್ಞಾನಿಕ ಮಾರ್ಗದರ್ಶನಗಳನ್ನು ನೀಡುವುದು.
 6. ಹೊಸ ಹೊಸ ಬೋಧನಾ ತಂತ್ರಗಳು ಹಾಗೂ ಇವುಗಳಿಗೆ ಸಂಬಂಧಿಸಿದ ಪಾಠೋಪಕರಣಗಳನ್ನು ತಯಾರಿಸುವುದು.
 7. ಸೌಲಭ್ಯಗಳಿಂದ ವಂಚಿತರಾದವರ ಹಾಗೂ ಅಂಗವಿಕಲರ ಮತ್ತು ಪ್ರತಿಭಾವಂತರ ಶಿಕ್ಷಣಕ್ಕೆ ಉತ್ತೇಜನ ನೀಡುವ ಬಗ್ಗೆ ಮಾರ್ಗೋಪಾಯಗಳನ್ನು ಸೂಚಿಸುವುದು.
 8. ವಿಚಾರ ಸಂಕಿರಣ, ಕಾರ್ಯಾಗಾರಗಳು ಮುಂತಾದವುಗಳನ್ನು ಒಳಗೊಂಡಂತೆ ಸಹ ಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
 9. ಪರಿಹಾರ ಬೋಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 10. ಸೇವಾನಿರತ ಶಿಕ್ಷಕರುಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗುವುದು ಹಾಗೂ ಅನೌಪಚಾರಿಕ ಮತ್ತು ವಯಸ್ಕರ ಶಿಕ್ಷಣ ನೀಡುವ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
 11. ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾದ ಪಠ್ಯ ಹಾಗೂ ಬೋಧನೆ ಮತ್ತು ಕಲಿಕಾ ಉಪಕರಣಗಳ ತಯಾರಿಕೆ ಕಡಿಮೆ ವೆಚ್ಚದ ಬೋಧನೋಪಕರಣಗಳ ತಯಾರಿಕೆ ಹಾಗೂ ಪರಿವೀಕ್ಷಣೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಸಾಧನ ಹಾಗೂ ತಂತ್ರಗಳ ತಯಾರಿಕೆ.
 12. ವಿಜ್ಞಾನ, ಮನೋವಿಜ್ಞಾನ ಸಂಪನ್ಮೂಲ ಕಟ್ಟಡ, ಅಂಗವಿಕಲ ಮಕ್ಕಳ ಕೊಠಡಿ, ಕಲಾ ಶಿಕ್ಷಣ ಕ್ರೀಡೆ ಹಾಗೂ ದೈಹಿಕ ಶಿಕ್ಷಣ ಇವುಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳ ನಿರ್ವಹಣೆ.
 13. ಕ್ಷೇತ್ರ ಅಧ್ಯಯನ ಮತ್ತು ಕ್ರಿಯಾ ಸಂಶೋಧನೆಗಳನ್ನು ಹಮ್ಮಿಕೊಳ್ಳುವುದು.
×
ABOUT DULT ORGANISATIONAL STRUCTURE PROJECTS